ಫಿಶಿಂಗ್
ಫಿಶಿಂಗಿನ ಹುಚ್ಚು ತೇಜಸ್ವಿಯವರಗೆ ಬಾಲ್ಯದಿಂದಲೂ ಇದೆ.
ತೇಜಸ್ವಿ ಅವರ ಸ್ನೇಹಿತ ರಾಮದಾಸ್ ಅವರ ಜೊತೆ ಮೀನು ಹಿಡಿಯಲು ಹೋಗುತ್ತಿದ್ದರಂತೆ. ಮಿಕ್ಕೆಲ್ಲರೂ ಇವರು ಮೀನು ಹಿಡಿಯಲು ಹೋಗುತ್ತಿದ್ದುದ್ದನ್ನು ಜಿಗುಪ್ಸೆ ಮತ್ತು ತಿರಸ್ಕಾರದಿಂದ ಕಂಡರೆ ಕುವೆಂಪು ಅವರು ಮಾತ್ರ ಮೀನು ಹಿಡಿದುಕೊಂಡು ಬಂದ ನಂತರದ ಕಥೆಯನ್ನೆಲ್ಲಾ ತಾಳ್ಮೆಯಿಂದ ವಿವರವಾಗಿ ಕೇಳುತ್ತಿದ್ದರಂತೆ. ಇನ್ನು ತೇಜಸ್ವಿ ಅವರ ಅನೇಕ ಪುಸ್ತಕಗಳಲ್ಲಿ ಅವರ ಫಿಶಿಂಗ್ ಅನುಭವಗಳ ರಸವತ್ತಾದ ಕಥೆಗಳಿವೆ. ಇವರ ‘ಅಲೆಮಾರಿಯ ಅಂಡಮಾನ್ ‘ ಪುಸ್ತಕದಲ್ಲಿ ಫಿಶಿಂಗಿನ ಚಿತ್ರ ವಿಚಿತ್ರ ಅನುಭವಗಳನ್ನು ದಾಖಲಿಸಿದ್ದಾರೆ ತೇಜಸ್ವಿ.

ತೇಜಸ್ವಿ ಅವರು ಅನೇಕ ಅದ್ಭುತವಾದ ಪೇಂಟಿಂಗ್’ಗಳನ್ನು ರಚಿಸಿದ್ದಾರೆ. ‘ I started my career as a Painter , ಆದರೆ ಜನ ನನ್ನ ಬರವಣಿಗೆಯನ್ನು ಮೆಚ್ಚಿ ನನ್ನನ್ನು ರೈಟರ್ ಅಂತ ಗುರುತಿಸಿದ್ದರಿಂದ ನಾನು ಬರವಣಿಗೆಯನ್ನೇ ನನ್ನ ಪ್ರಮುಖ ಮಾಧ್ಯಮವಾಗಿ ತೆಗೆದುಕೊಂಡೆ ‘ ಎಂದು ಖುದ್ದು ತೇಜಸ್ವಿ ಅವರೇ ಒಂದು ಸಂದರ್ಶನದಲ್ಲಿ ಹೇಳಿದ್ದಾರೆ. ಮೈಸೂರಿನ ಸುಪ್ರಸಿದ್ಧ ಕಲಾವಿದರಾದ ಎಸ್.ಎನ್.ಸ್ವಾಮಿಯವರ ಬಳಿ ಇವರ ಚಿತ್ರಕಲೆಯ ಅಭ್ಯಾಸ ಶುರುವಾಗಿದ್ದು.