ಫಿಶಿಂಗ್
ಫಿಶಿಂಗಿನ ಹುಚ್ಚು ತೇಜಸ್ವಿಯವರಗೆ ಬಾಲ್ಯದಿಂದಲೂ ಇದೆ.
ತೇಜಸ್ವಿ ಅವರ ಸ್ನೇಹಿತ ರಾಮದಾಸ್ ಅವರ ಜೊತೆ ಮೀನು ಹಿಡಿಯಲು ಹೋಗುತ್ತಿದ್ದರಂತೆ. ಮಿಕ್ಕೆಲ್ಲರೂ ಇವರು ಮೀನು ಹಿಡಿಯಲು ಹೋಗುತ್ತಿದ್ದುದ್ದನ್ನು ಜಿಗುಪ್ಸೆ ಮತ್ತು ತಿರಸ್ಕಾರದಿಂದ ಕಂಡರೆ ಕುವೆಂಪು ಅವರು ಮಾತ್ರ ಮೀನು ಹಿಡಿದುಕೊಂಡು ಬಂದ ನಂತರದ ಕಥೆಯನ್ನೆಲ್ಲಾ ತಾಳ್ಮೆಯಿಂದ ವಿವರವಾಗಿ ಕೇಳುತ್ತಿದ್ದರಂತೆ. ಇನ್ನು ತೇಜಸ್ವಿ ಅವರ ಅನೇಕ ಪುಸ್ತಕಗಳಲ್ಲಿ ಅವರ ಫಿಶಿಂಗ್ ಅನುಭವಗಳ ರಸವತ್ತಾದ ಕಥೆಗಳಿವೆ. ಇವರ ‘ಅಲೆಮಾರಿಯ ಅಂಡಮಾನ್ ‘ ಪುಸ್ತಕದಲ್ಲಿ ಫಿಶಿಂಗಿನ ಚಿತ್ರ ವಿಚಿತ್ರ ಅನುಭವಗಳನ್ನು ದಾಖಲಿಸಿದ್ದಾರೆ ತೇಜಸ್ವಿ.